Monday, November 3, 2008

ಗೆಳಯಾ......ಗೆಳೆಯಾ........

ಆಫೀಸಿನಲ್ಲಿದ್ದೆ, ಹಾಗೇ ನನ್ನ ಕರೆಗಂಟೆ ಒಮ್ಮೆ ಗುಂಗಿಸಿತು. ಅತ್ತಲಿಂದ ಬಂದ ಅಶರೀರವಾಣಿ, ಬಿಡುವಾಗಿದೀಯ ಬೆಂಗಳೂರಿಗೆ ಬರ್ತೇನೆ ಅಂದ. ಹೌದು ಬಹುದಿನಗಳಿಂದ ಒಬ್ಬರನೊಬ್ಬರು ಭೇಟಿ ಮಾಡಲು ಆಗದ ನಾವಿಬ್ಬರು ಗೆಳೆಯರು ಅಂದು ಒಂದೇ ಸೂರಿನಡಿಯಲ್ಲಿ ಕೆಲಕಾಲ ಹರಟಿದೆವು. ಮೈಸೂರಲ್ಲಿ ನೆಲೆಸಿರೋ ಗೆಳೆಯ ಜೋಮನ್ ಅದ್ಯಾಕೋ ಬೆಸರಗೊಂಡು ಬೆಂಗಳೂರು ಬಸ್ ಏರಿದ್ದ. ಹಾಗೇ ಮೂರು ತಾಸುಗಳ ದಾರಿ ಸವೆಸಿ ಬಂದು ಮೆಜೆಸ್ಟಿಕ್ ಹೆಬ್ಬಾಗಿಲಿಗೆ ನಿಂತಿದ್ದ.
ಮುರುದಿನ ಕತ್ಚಲ ಪಾಳೆಗೆ ಬರೋ ನೆಮ್ಮದಿ ಇದ್ದಿದ್ರಿಂದ ಹಾಯಾಗಿ ಸಮಯ ಕಳೆದೆವು. ದೂರದ ಅಮೇರಿಕಾ ಚುನಾವಣೆಯಿಂದ ಆರಂಭವಾಗಿ ಕಲಾಸಿಪಾಳ್ಯದ ಗಲ್ಲಿಒಳಗೆ ನುಸುಳಿ, ದೂರದ ಧಾರವಾಡದ ಮಧುರ ನೆನಪನ್ನು ಮೆಲುಕುಹಾಕಿದೆವು.
ಕರ್ನಾಟಕ ವಿಶ್ವವಿದ್ಯಾಲಯ, ನಮ್ಮಿಬ್ಬರನ್ನು ಹತ್ತಿರಕ್ಕೆ ತಂದು ಒಂದು ಅಪರೂಪದ ಬಾಂಧವ್ಯ ಬೆಸೆದ ಮಣ್ಣದು. ಮೊದಮೊದಲು ಅಷ್ಟಾಗಿ ಬೆರೆಯದ ನಾವುಗಳು ಅಂತ್ಯದ ಹೊತ್ತಿಗೆ ಹಾಲು ನೀರಾಗಿದ್ವಿ. ಅಜ್ಜನಂಗಡಿಯ ಕ್ಯಾಂಟೀನ್ ಕಟ್ಟೆ ನಮ್ಮ ಪಟಾಲಾಂ ನ ವೇದಿಕೆಯಾಗಿತ್ತು. ಮೊನ್ನೆ ಕೂಡಾ ಮಾತು ಹಾಗೆ ತೇಲುತ್ತಾ ವಿವಿ ಅಂಗಳಕ್ಕೆ ಬಂದು ನಿಂತಿತ್ತು. ಆಗಿನ ದಿನಗಳೇ ಹಾಗೆ, ತಿಂಗಳ ಆರಂಭದಲ್ಲಿ ಒಂದಿಷ್ಟು ಕಾಸು ಕೈಗಿದ್ದರೆ ಸಾಕು. ಮೊದಲ ಪ್ರೋಗ್ರಂ ಚಿಕನ್ ಹಾಗೂ ಕಟಕಲ ರೊಠ್ಠಿ. ನಿಜ ಅಪರೂಪದ ಈ ಊಟ ಮತ್ತೆ ಇಬ್ಬರ ತುಟಿ ಅಂಚಿಗೆ ಬಂದು ಹೋಗಿತ್ತು. ಇಬ್ಬರ ಹಾಸ್ಟೆಲ್ ನಡುವೆ ಮೂರ್ನಾಲ್ಕು ಕಿ ಮೀ ಅಂತರ. ಆಗಿನ ಜೋಷೆ ಅಂಥದ್ದು. ಜೋಮನ ರೂಮಲ್ಲಿ ತಯಾರಾಗುತಿದ್ದ ನಳಪಾಕ ನೇರ ಶಾಲ್ಮಲೆಯ ಮಡಿಲಿಗೆ ಬಂದು ಸೇರುತಿತ್ತು. ಅದು ಬರೋಬ್ಬರಿ ಅಂಗಳದಲ್ಲಿ ಮಲಗಿದ್ದ ಹೆಣಗಳು ಎದ್ದು ತಿರುಗಾಡುವ ವೇಳೆಗೆ.
ನಡು ರಾತ್ರಿಯ ಇಂಥಹ ಅದೆಷ್ಟೋ ಚಿಕನ್ ಪಾರ್ಟಿಗಳು ಮತ್ತೆ ನಮ್ಮಬ್ಬರ ನೆನಪಿನ ಪುಟ ತಿರುಗಿಸಿತ್ತು.
ಏನೂ ಇಲ್ಲದೇ, ಕೈಗೆ ಸಿಕ್ಕ ಉಕ್ಕು ಖಾರ ಬೆರಸಿ ತಿಂದಿದ್ದ ಅದರ ರುಚಿಯೇ ಬೇರೆ. ನಿಜ ಈಗ ಎಲ್ಲವೂ ಬದಲಾಗಿದೆ. ಹತ್ತಿರವಿದ್ದವರು ದೂರಾಗಿದ್ದೇವೆ. ಆಗೊಮ್ಮೆ ಈಗೊಮ್ಮೆ ಬಂದು ಹೋಗೋ ಗೆಳೆಯ ಈ ಹೊತ್ತಿಗೆ ಸಿಹಿ ನಿದ್ರೆಗೆ ಜಾರಿರಬೇಕು. ಹಾಗೊಮ್ಮೆ ಕನಸು ಬಂದ್ರೆ, ಸ್ಪಪ್ನ ಸುಂದರಿ ಬದಲಿಗೆ ಚೀರಿ, ಹಾಗೇ, ಕೂಗಿ ನಕ್ಕ ಆ ಗಳಿಗೆ ಎದುರಾಗಲಿ.
ಸುಮ್ಮನೆ ಬಂದು ಹೋದ ಗೆಳಯನಿಂದ ಹೊಸ ಹುಮ್ಮಸ್ಸು ಮೂಡಿದೆ. ಕೂಡಿ ಕಳೆದ ಆದಿನಗಳು, ಎಂದಿಗೂ ಹಸಿರಾಗಿರಲಿ.
ಇತ್ತಕಡೆ ಒಲೆಮೇಲಿದ್ದ ಚಿಕನ್ ಬೆಂದಾಗಿದೆ. ಮತ್ತೆ ಘಮ ರೂಮಿನ ಆವರಣದಲ್ಲಿ ತೇಲುತ್ತಿದೆ. ಬನ್ನಿ ಹಾಗೇ ಒಂದು ರುಚಿ ನೋಡೋಣ.
ಹಾಗೇ ಸುಮ್ಮನೆ........
ಪ್ರತೀಕ್ ಕೊಟ್ರೇಶ್

1 comment:

jomon varghese said...

ಸರಳವಾಗಿ ಆಪ್ತವಾಗಿ, ಬರೆದಿದ್ದೀಯಾ ಪ್ರತ್ಯಾ. ಹೀಗೆಲ್ಲಾ ಬರೆದು ಹಳೆಯದನ್ನೆಲ್ಲಾ ನೆನಪಿಸಿಕೊಳ್ಳುವಂತೆ ಮಾಡಿ, ನಮ್ಮನ್ನು ಇನ್ನಷ್ಟು ಭಾವುಕರನ್ನಾಗಿ ಮಾಡಬೇಡ ಮಾರಾಯ. ಸುಮ್ಮನೆ ಧಾರವಾಡಕ್ಕೆ ವಾಪಾಸ್ಸು ಹೋಗಿ ಇನ್ನೊಮ್ಮೆ ಎಂಎ ಮಾಡಬೇಕೆನಿಸುತ್ತದೆ.

ಅಂದಹಾಗೆ ಈ ಬ್ಲಾಗಿನ ಫಾಂಟ್ ನ್ನು ಸ್ವಲ್ಪ ಬದಲಿಸು. ಚಿಕ್ಕದು ಮಾಡು. ಪೇಜ್ ನಲ್ಲಿ ತುಂಬಾ ದೊಡ್ಡದಾಗಿ ಕಾಣುತ್ತಿದೆ.