
ಮಿಡಿಯುವ ಹೃದಯಗಳ ಮನಸ್ಸುಗಳ ಮಾತು ನಿಜಕ್ಕೂ ಮಧುರ. ಆಗ ತಾನೆ ಪ್ರೇಮ ಪಾಶಕ್ಕೆ ಬಿದ್ದ ಪ್ರೇಮಿಗಳ ಮನಸ್ಸಿನ ಮಾತು ಸಿಹಿ-ಸಿಹಿ. ಕಣ್ಣೋಟದ ಮಿಂಚಲ್ಲೇ ಭಾವನೆಗಳನ್ನು ಹೇಳುವ ಕಲ್ಪನೆ
ಅದ್ಭುತ ಅಲ್ವಾ ಸ್ನೇಹದ ಮಾತಿಂದ ಪ್ರೀತಿಯ ಆನಂದ ಪಡೆಯೋ ಯುವ ಹೃದಯಗಳಿಗೆ ಮೌನಗಳ ಮಾತೆ ಬೆಸುಗೆ.
ಲವ್ವೇ ನಮ್ಮ ಬೈಬಲ್ಲು, ಅಂತ ಪುಸ್ತಕಗಳನ್ನು ದೂರಮಾಡಿ ಬಣ್ಣದ ಲೋಕದಲ್ಲಿ ವಿಹರಿಸುವ ಪ್ರೇಮಿಗಳಿಗೆ ಮೌನಗಳ ಮಾತೆ ಕೊಂಡಿ. ಪ್ರೀತಿಯ ನಶೆಯಲ್ಲಿ ಮುಳುಗಿ ಹೋದ ಪ್ರೇಮಿಗಳು ಪ್ರೀತಿಯನ್ನು ಬಿಚ್ಚಿ ಹೇಳಿಕೊಳ್ಳೋ ಗೋಜಿಗೆ ಹೋಗಲ್ಲ.
ಇದು ಎಲ್ಲಿವರೆಗೆ........
ತಮ್ಮಿಬ್ಬರ ಪ್ರಿತಿಯನ್ನ ಬಚ್ಚಿಟುಕೊಂಡೇ ಪ್ರೀತಿಯ ಗೂಡ ಕತ್ತಿಕೊಳ್ತಾ ಸಾಗ್ತಾರೆ. ನಿಜಕ್ಕೂ ಈ ಮನಸ್ಸುಗಳ ಮಾತೇ ಅಪಾಯಕಾರಿ. ಮೌನದಲ್ಲೇ ಪಾರ್ಕು, ಸಿನಿಮಾ ಮುಗಿಯುತ್ತೆ.
ಮೌನ ಮುರಿದಾಗ........
ಸಂಭಿವಿಸುವುದೇ ದೊಡ್ಡ ಅನಾಹುತ........
ಒಬ್ಬ ಒಳ್ಳೆ ಫ್ರೆಂಡ್ ಅಂತ ಅಸ್ಟೊಂದು ಫ್ರೀಯಾಗಿ ನಡ್ಕೊಂಡಿದ್ದೆ ತಪ್ಪಾ........ ನೀನು ನನ್ನ ತಪ್ಪಾಗಿ ಅರ್ಥೆಸಿಕೊಂಡೆ ಅನ್ನೋ ಮೂಲಕ ಮಧುರ ಸ್ನೇಹಕ್ಕೆ ಕೊಡಲಿ ಪೆಟ್ಟು. ಅಸಲಿಗೆ, ಅನೇಕ ಯುವಕರ ಯುವತಿಯರ ಮದ್ಯ ಜರಗುವುದೇ ಇಂತಹ ಅನಾಹುತ. ಅದಕ್ಕೆ ಮನಸ್ಸುಗಳ ಮಾತು ಮಧುರ. ಆದ್ರೆ, ಅತಿಯಾದರೆ ವಿಷ. ಅಲ್ವಾ, ಅದಕ್ಕೆ ಮೌನದ ಮಾತು ಕಮ್ಮಿಯಾಗಬೇಕು. ಮೌನ ಮುರಿದು ಲವ್ವನ್ನ ಹೇಳಿಕೊಂಡು ಬಿಡಿ. ಒಂದು ಮಧುರ ಸ್ನೇಹ ಮುರಿದುಕೊಳೋ ಮೊದಲು ಮೌನ ಮುರಿಯುವುದು ಒಳಿತು ಅಲ್ವಾ.......
ಮನಸ್ಸುಗಳ ಮಾತಿಗೆ ಒಪ್ಪಿಗೆಯ ಅಪ್ಪುಗೆ ಸಿಕ್ಕಾಗ ಮತ್ತದೇ ಮನಸ್ಸುಗಳ ಮಾತಲ್ಲಿ ಒಲವಿನ ಸಿಹಿ ಪಡೆಯಬಹುದಲ್ವೆ ?
No comments:
Post a Comment