Tuesday, October 14, 2008

ಬೀಜಿಂಗ್ ಒಲಂಪಿಕ್ಸ್ ನಯವಂಚನೆ

ಈಗೆನಿದ್ರು ಅಂದ ಚಂದ ಗಿಮಿಕ್ಸ್ ಕಾಲ . ಮೊದಲು ನೋಡಲು ಅಂದವಾಗಿರಬೇಕು ಪ್ರತಿಭೆಗೆನಿದ್ರು ಎರಡನೆಯ ಸ್ಥಾನ . ಹೌದು ಬೀಜಿಂಗ್ ಒಲಂಪಿಕ್ಸ್ ನಲ್ಲಿ ಎಲ್ಲರ ಗಮನ ಸೆಳೆದ ಈ ಪುಟ್ಟ ಪೋರಿ ರಾಷ್ಟ್ರ ಗೀತೆ ಯನ್ನ ಹಾಡಿ ಎಲ್ಲರ ಮನೆಮಾತಾಗಿದ್ದಳು . ಈಕೆ ಲೀನ್ ಮಿಯೋಕ್ . ಆದರೆ ಅಸಲಿಗೆ ಈ ಪುಟಾಣಿ ಹಾಡನ್ನೇ ಹಾಡ್ತಿರಲಿಲ್ಲ.ಕೇವಲ ಬಾಯಿ ಸನ್ನೆ ಮಾಡತಿದ್ಲು. ಅರೇ ಇದೇನು ಅಂತ ಹುಬ್ಬೇರಿಸಬೇಡಿ. ಬರೀ ಅಂದ ಚಂದ ಬಿಂಕ ಬಿನ್ನಾಣಕ್ಕಾಗಿ ಈಕೆಯನ್ನ ವೇದಿಕೆ ಮೇಲೆ ನಿಲ್ಲಿಸಲಾಗಿದೆ.

ಯಾಂಗ್ ಪೇಯಿ ಲೀನ್ ಮಿಯೋಕ್

ಎಲೆಮರೆಕಾಯಿ ತಪ್ಪುಯನದಲ್ಲ


ವೇದಿಕೆಯ ಹಿಂಭಾಗದಿಂದ ಮಧುರ ಕಂಠ ಹೊರಹೊಮ್ಮುತಿತ್ತು. ಇಲ್ಲೇ ಆಗಿದ್ದು ಅಸಲಿಗೆ ನಯವಂಚನೆ. ಹಿಂದಿನಿಂದ ಹೊರಹೊಮ್ಮುತ್ತಿದ್ದ ಕೋಗಿಲೆ ಧ್ವನಿ ಯಾಂಗ್ ಪೇಯಿ ಎಂಬ ಏಳು ವರ್ಷದ ಪ್ರಚಂಡ ಪುಟಾಣಿಯದ್ದು. ಯಾಂಗ್ ಪೇಯಿ ನೋಡಲು ಅಂದವಾಗಿರಲಿಲ್ಲ, ದಂತರಚನೆ ಸರಿಯಾಗಿಲ್ಲ ಎಂಬ ಕಾರಣದಿಂದ ನೈಜ ಪ್ರತಿಭೆಯನ್ನು ತೆರೆಯ ಹಿಂದೆ ಬಚ್ಚಿಡಲಾಗಿತ್ತು. ಇದು ನಾವು ಹೇಳುತ್ತಿರುವ ಮಾತಲ್ಲ. ಸ್ವತಹ ಸಂಘಟಕರೇ ನೀಡಿದ ಸಮಜಾಯಿಸಿ. ಒಂದೇ ಮಾತಲ್ಲಿ ಹೇಳೋದಾದ್ರೆ, ವಿಶ್ವದ ಮುಂದೆ ನಿಜ ಪ್ರತಿಭೆ ಎಲೆ ಮರೆ ಕಾಯಿಯಾಯ್ತು. ಇದು ಮಗುವೊಂದರ ಕಥೆ ಮಾತ್ರವಲ್ಲ. ಅನೇಕರು ತೆರೆ ಮರೆಯ ಹಿರೋಗಳಾಗಿಯೇ ಉಳಿದುಬಿಡ್ತಾರೆ. ಆದ್ರೆ ನಾನೇ ಬರೆದೆ ನಾನೇ ಹಾಡಿದೆ ಎಂಬ ಆತ್ಮ ತೃಪ್ತಿ ಅವರಲ್ಲಿ ಶಾಶ್ವತವಾಗಿರುತ್ತದೆ.

No comments: