Monday, October 13, 2008

ಮೆಲುಮಾತು..............
ಪ್ರಿಯ ಅಕ್ಷರಭಿಮಾನಿಗಳೇ ಹವ್ಯಾಸಕ್ಕೆಂದು ಬರೆಯಲು ಕುಳಿತವರು ನಾವಲ್ಲ . ಈ ನಿಮ್ಮ ಬ್ಲಾಗ್ ಪ್ರಪಂಚದಲ್ಲಿ ಈಗಷ್ಟೇ ಅಂಬೆಗಾಲಿಡಲು ನಿರ್ಧರಿಸಿ ಬಂದವರು. ನಮಗೆ ಗೊತ್ತಿದ್ದನ್ನ , ಅನಿಸಿದ್ದನ್ನ, ಅನುಭವಿಸಿದ್ದನ್ನ, ಅಚ್ಚರಿ ಮೂಡಿಸಬಲ್ಲ ಕೆಲ ಸಂಗತಿಗಳನ್ನ ಹಂಚಿಕೊಳ್ಳಲು ನಿರ್ಧರಿಸಿ ಇದೀಗ ಬರೆಯಲು ಕುಳಿತಿದ್ದೇವೆ. ಹುಂಬು ಮನಸ್ಸಿನ ಕೆಲವರು ಒಂದೆಡೆ ಸೇರಿ ಈ ಹನಿಗಳ ಲೀಲೆ ಹೇಳಹೊರಟಿದ್ದೇವೆ.
ಪ್ರತಿದಿನ ಸುದ್ದಿಮನೆಯಲ್ಲಿ ನಮ್ಮದು ಅಕ್ಷರಗಳೊಂದಿಗಿನ ಮಹಾ ಸಮರ. ಗೊತ್ತಿದ್ದೋ, ಗೊತ್ತಿಲ್ಲದೆಯೋ, ನಾವು ಮಾಡಿದ ತಪ್ಪುಗಳು ನಮ್ಮನುಭವಕ್ಕೆಬಂದು ಮಿಂಚಿ ಮರೆಯದ ಸಂಗತಿಗಳನ್ನು ಹೇಳುವ ಸಣ್ಣದೊಂದು ಪ್ರಯತ್ನ ಈ ನಮ್ಮ ಹನಿಗಳಲೀಲೆ.
ಬರವಣಿಗೆ ಮಾತ್ರ ಗೊತ್ತಿರುವ ಮತ್ತಿನೇನು ತಿಳಿಯದ ಪ್ರಪಂಚದಲ್ಲಿ ಬದುಕಿ ಒಂದಿಷ್ಟು ತಿಳಿದಿದ್ದೇವೆ. ಬರೆಯಬೇಕೆಂಬ ಬಯಕೆ ಇದ್ರೂ, ಕೆಲವೊಮ್ಮೆ ಅದು ಸಾಧ್ಯವಾಗಿಲ್ಲ. ನಮ್ಮಲ್ಲೇ ಅವ್ಯಕ್ತವಾಗಿ ಕುಳಿತಿರುವ ಒಂದಿಷ್ಟು ಪದಗಳನ್ನು ಹೆಣೆದು, ನಿಮಗೊಂದು ಅದ್ಭುತವೆನ್ನುವ ಕೃತಿ ನೀಡುವ ತಯಾರಿ ನಡೆದಿದೆ. ಇನ್ನೇನಿದ್ರೂ ನಾವು-ನೀವು ಮತ್ತು ನೀವು ಮಾತ್ರ. ಓದಿ ಅನುಭವಿಸಿ, ತಮಾಷೆಯಾಗಿದ್ರೆ ಸಣ್ಣದೊಂದು ನಗುಬೀರಿ, ಕಣ್ಣು ಕೆಂಪಾದರೆ ಅಷ್ಟೇ ತೀಕ್ಷ್ಣವಾಗಿ ತಿರುಗಿಬೀಳಿ. ಒಂದೊಮ್ಮೆ ನಿಮ್ಮೆದೆಯ ಸಾಹಿತ್ಯಕ್ಕೆ ಸಂಗೀತವಾದ್ರೆ ಹಾಗೆ ಸುಮ್ಮನೆ ಆ ದಿನಗಳ ನೆನೆಯಿರಿ. ತಿದ್ದಿ, ತೀಡಿ ಹೊಸ ಭಾಷೆ ಬರೆಯಲು ಕೈಜೋಡಿಸಿ.
ಹನಿಗಳಲೀಲೆ..................
ಹೆಸರೇ ಹೇಳುವಂತೆ ಸುಪ್ತ ಮನಸ್ಸಿನಲ್ಲಿ ಅಡಗಿರುವ ನಮ್ಮೆದೆಯ ಹಾಡನ್ನು ಹಾಡಿಬಿಡುವ ಹಂಬಲ. ಭೂಮಿಗಿಳಿಯುವ ಸಾವಿರಾರು ಹನಿಗಳಲ್ಲಿ ಕೆಲವಕ್ಕೆ ಮಾತ್ರ ಮುತ್ತಾಗುವ ಭಾಗ್ಯ. ಹಾಗೇ ಹನಿಗಳ ಲೀಲೆಯಲ್ಲಿ ಮೂಡಿಬರುವ ಅಕ್ಷರಗಳ ಚಿತ್ತಾರ. ಕನ್ನಡಿಗರ ಮನದಂಗಳದಲ್ಲಿ ಮುತ್ತಾಗುವ ಅವಕಾಶವನ್ನ ಅರಸಿ ನಿಂತಿದ್ದೇವೆ.
ಪದೇ ಪದೇ ಯೋಚಿಸಿದ್ರೂ ಕಣ್ಣೆದುರಲ್ಲಿ ಮತ್ತದೇ ನೀರಹನಿ. ಒಮ್ಮೆ ಉಸಿರು ಬಿಗಿ ಹಿಡಿದು ಹಿಂತಿರುಗಿ ನೋಡಿದ್ರೆ ಕತ್ತಲ ಕಾರ್ಮೋಡ. ಇಂತಹ ಕತ್ತಲಲ್ಲೂ ಬೆಳದಿಂಗಳ ಹುಡುಕುತಿದೆ ಹನಿಗಳ ಬಳಗ. ಇಂದಿನಿಂದ ಅಕ್ಷರ ಬಾಂದವರ ಶಾಲಾ ದಿನಗಳನ್ನು ಒಮ್ಮೆ ಕದಡುವ ಸಾಹಸ ಮಾಡಿದ್ದೇವೆ. ಬನ್ನಿ, ಮಳೆಹನಿಗಳಲ್ಲಿ ತೊಯ್ದು ಮಿಂದೆದ್ದು ಬರೋಣ....................
ಈಗಸ್ಟೇ ಆರಂಭ,
ವಿಶ್ವಾಸವಿರಲಿ,
ಹನಿಗಳಬಳಗ.



1 comment:

jomon varghese said...

congrats, &

hearty welcome to blog world ... ನೀವು ಹನಿಸಲಿರುವ ಲೀಲೆಗಳನ್ನು ಕಾಯುತ್ತಾ ಕೂತಿದ್ದೇನೆ. ಬೇಗ ಮುಂದಿನ ಪೋಸ್ಟು ಕುಟ್ಟಿ.

- ಜೋಮನ್.